ಒಂದು ಸಂಜೆ ನೆನಪು-- ನನ್ನ ಸ್ವ ರಚಿತ ಕವನ.

ಒಂದು ಸಂಜೆ ನೆನಪು
ಬಂತು ಗೆಳತಿ ನಿನ್ನ ನೆನಪು ಒಂದು ಸಂಜೆ ,
ಸತ್ತಿದ್ದ ಹೃದಯ ,ಅತ್ತೆ ಹೊಡೆದಂತೆ ,
ಮುಗಿದೋದ ಘಟನೆ ಮತ್ತೆ ನಡೆದಂತೆ. !

ಸ್ನೇಹದಿ ನನ್ನ ಕನಸಿನಲ್ಲಿ ,
ಕೂಣಿದಾಡಿದಿ ನನ್ನ ಪ್ರೇಯಸಿಯಾಗಿ ,
       ಕನಸಿನ ಹುಡುಗಿ ಕೈಗೆ ಸಿಕ್ಕಲೇ ಇಲ್ಲ ,
       ಮತ್ತೆ ಕತ್ತಲೆ ನನ್ನ ಮನದ ತುಂಬ.!
ಎಂಥ ಕತ್ತಲೆಯಲ್ಲೂ ಹೊಳೆವ ನಿನ್ನ ಕಣ್ಣು ,
ತಲೆಯತ್ತಿ ನೋಡಿದರೆ ಮುಗುಳ್ನಗುತ್ತಿದೆ ನನ್ನತ್ತ.!
                ಕೋಪದಿ ನೋಡತೈತಿ ನಿನ್ನ ಕಣ್ಣು , ಕಳೆದೊಗಲಿ ಆ ದ್ವೇಷ ,
                 ನಿನ್ನ ನೆನಪು ನನಗೆ ಚಿರಪರಿಚಿತ !
ಕಾರ್ಮೋಡ ಕವಿದಿಹದು , ಮುಚಿಹದು ಕನಸನ್ನ ,
ನೀರಾಗಿ ಸುರಿದು ನಡೆಯಲಿ (ಕನಸು) ನನಸಾಗೋ ಯತ್ನ !
      ಬಾ ಗೆಳತಿ , ಬಾ . ಬೆಳಗು ನನ್ನ ಬದುಕಿನ ದೀಪವನ್ನು ,
      ಮತ್ತೆ ಬೆಳಕಗುವದು ನಮ್ಮ ಈ ಬದುಕು !
                                                -ರಚನೆ- ನಾನು 
                                                        RJ ARUN .



                  
   


Comments

Pammi said…
Very gud "kavana", impressing...