ಓನ್‌‌‌ ಸೈಡ್‌ ಲವ್‌‌ : ಎಷ್ಟೊಂದು ಸುಮಧುರ

ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸು. ನಮಗರಿವಿಲ್ಲದೇ ನಾವು ದೊಡ್ಡವರಾಗುತ್ತೆವೆ. ಬದುಕಲ್ಲಿ ಹರೆಯತನ ಬರುತ್ತದೆ. ಹರೆಯದ ವಯಸ್ಸಂದರೆ ಹಾಗೇನೆ, ಒಂದು ತರಹದ ಸುಮಧುರ ಭಾವನೆಗಳ ವಯಸ್ಸು. ಅನ್ಯ ಲಿಂಗದ ವ್ಯಕ್ತಿಯನ್ನು ನೋಡಿದಾಗ ಮನಸ್ಸಿನಲ್ಲಿ ಒಂದು ರೀತಿಯ ತಳಮಳವಾಗುವ ವಯಸ್ಸಿದು. ಇದನ್ನು ಆಕರ್ಷಣೆ ಅನ್ನಬೇಕೋ ಅಥವಾ ಪ್ರೀತಿ ಎನ್ನಬೆಕೋ ಎಂದು ಯೋಚಿಸುವಷ್ಟರಲ್ಲಿಯೇ ನಮ್ಮ ಮನಸ್ಸಿನಲ್ಲಿ ಪ್ರೀತಿಯ ಹೂವೊಂದು ಅರಳಿರುತ್ತದೆ.

ಒಂದು ಜೀವ ನಮ್ಮ ಹೃದಯದೊಳಗಡೆ ಕೂತು , ಹುವಿನಂತಹ ನಗೆಯನ್ನು ಬೀರಿ  ಹೃದಯ ಬಡಿತ ಹೆಚ್ಚಿಸುತ್ತದೆ. ಪ್ರತಿದಿನವು ಆ ಹೂವಿನದ್ದೆ ಚಿಂತೆ ಆಗುತ್ತದೆ. ಅದರ ನಗು , ಅದರ ನೆರಳು, ಖುಷಿ ಎಲ್ಲವೂ ಚೆಂದ ಅನಿಸತೊಡಗುತ್ತದೆ. ನಾನು ಹೇಳಹೊರಟಿರುವುದೆನೆಂದರೆ, ಈ ಹರೆಯದ ಪ್ರೀತಿ ಒಂತರಾ ಸುಮಧುರ ಎನಸುತ್ತದೆ.

ನಮ್ಮ ಪಕ್ಕದ ಮನೆ ಹುಡುಗ/ಹುಡುಗಿ , ದಾರಿಯಲ್ಲಿ ಕಂಡ ಮುಖ, ಕ್ಲಾಸರೂಮ್ ಚೆಲುವೆ/ಚೆಲುವ, ಮಾವನ ಮಗ/ಮಗಳು ಹೀಗೆ ಯಾವುದೋ ಒಂದು ಜೀವ ನಮ್ಮ ಹೃದಯದೊಳಗಡೆ ನಮಗರಿವಿಲ್ಲದೇ ಬಂದು ಕೂಡುತ್ತದೆ. ಆಗ ಮನಸ್ಸಿನಲ್ಲಿ ಮಾತ್ರ ಏನೊ ತಳಮಳ ಪ್ರಾರಂಭವಾಗುತ್ತದೆ ಮತ್ತು ಖುಷಿ ಅನಿಸುತ್ತದೆ.

ಪ್ರತಿದಿನ ಅದೇ ಜೀವದ ಚಿಂತೆ, ಊಟಕ್ಕೆ ಕುಳಿತಾಗ, ಓದುತ್ತ ಕುಳಿತಾಗ , ಮಲಗುವಾಗ ಪ್ರತಿ ಕ್ಷಣವು ಆ ಜೀವದ್ದೆ ನೆನಪು ಬರುತ್ತದೆ ಹಾಗು ಈ ನೆನಪು ಮನಸ್ಸಿಗೆ ತುಂಬ ಹಿತವನ್ನು ನೀಡುತ್ತದೆ. ಇಷ್ಟೆಲ್ಲದರ ಮಧ್ಯೆ ಆ ವ್ಯಕ್ತಿ ನಮಗೆ ತುಂಬ ಹತ್ತಿರ ಎಂದು ಅನಿಸಿಬಿಡುತ್ತದೆ. ಆದರೆ ಆ ವ್ಯಕ್ತಿಯನ್ನು ಪರಿಚಯ ಮಾಡಿಕೊಳ್ಳಲು ಮನಸ್ಸು ಬಯಸುತ್ತಿರುತ್ತದೆ. ಆದರೆ ಆ ಜೀವ ಅಪರಿಚಿತ ಆದರೂ , ನನ್ನ ಹೃದಯದ ಭಾಗ ಎಂದು ಅನಿಸುತ್ತದೆ.

ಇದನ್ನು ಓನ್ ಸೈಡ ಲವ್‌ ಎಂದು ಕರೆಯಬಹುದು. ಆ ಜೀವ, ಅದರ ನೆರಳು , ಆ ಜೀವದ ಧ್ವನನಿ ಕೇಳಿದರೂ ಕೂಡ ಮನಸ್ಸಿಗೆ ತುಂಬ ಖುಷಿ ಎನಿಸುತ್ತದೆ. ಆದರೆ ಆ ಜೀವ ನಮ್ಮ ಕಡೆ ನೋಡುವುದೇ ಇಲ್ಲ. ನಿಮ್ಮ ಹೃದಯದ ಬಡಿತ ಆ ಜೀವಕ್ಕೆ ಕೇಳಿಸುತ್ತಿರುವುದಿಲ್ಲ. ಆದರೆ ಆ ಜೀವದ ಪ್ರತಿ ಹೃದಯ ಬಡಿತ ನಿಮಗೆ ಕೇಳಿಸುವ ಹಾಗೆ ಅನಿಸುತ್ತಿರುತ್ತದೆ. ಇದನ್ನು ಓನ್ ಸೈಡ್‌ ಲವ್‌ ಎಂದು ಕರೆಯಲಾಗುತ್ತದೆ.  ಈ ಓನ್‌ ಸೈಡ ಲವ್‌ ಕೂಡ ತುಂಬಾ ಎಂಜಾಯ್‌ ಮಾಡುವ ಜನರು ಸಾಕಷ್ಟು ಜನ ಇದ್ದಾರೆ.

ನಮ್ಮ ಮನಸ್ಸಿನ ಭಾವನೆ , ಪ್ರೀತಿಯ ಮಾತುಗಳು , ನಮ್ಮ ಹೃದಯ ಬಡಿತ ಆ ಜೀವಕ್ಕೆ ಹೇಳಬೇಕೆನ್ನುವಷ್ಟರಲ್ಲ ಆ ಜೀವ ಮಾಯವಾಗಿರುತ್ತದೆ. ಆದರೆ ಆ ನೆನಪು ಮಾತ್ರ ಸದಾ ಕಾಲ ಹಾಗೆ .ಇರುತ್ತದೆ, ಪ್ರತಿಯೊಬ್ಬರ ಜೀವನದಲ್ಲಿ ಈತರಹದ ಓನ್‌‌‌ಸೈಡ್‌ ಲವರ್‌‌ಗಳು ಬಂದು ಹೋಗಿರುತ್ತಾರೆ. ಆ ಜೀವಿಯ ಹೆಸರು, ವಿಳಾಸ  ಏನು ಗೊತ್ತಿರುವುದಿಲ್ಲ, ಆದರೂ ಆತನು ನಮ್ಮ ಹೃದದೊಳಗಡೆ ಬಂದಿರುಯತ್ತಾನೆ ಅಥವಾ ಬಂದಿರುತ್ತಾಳೆ.

ಈ ಓನ್‌ ಸೈಡ್‌ ಲವ್‌‌ ನಮ್ಮ ಹೃದಯದೊಳಗಡೆ ಅರಳಿರುತ್ತದೆ , ಹಾಗೆ ಮಾಸಿ ಹೊಗುತ್ತದೆ. ಆದರೆ ನೆನಪು ಮಾತ್ರ ಹೊಗಿರುವುದಿಲ್ಲ. ಈಗ ಈ ತರಹದ ಒನ್‌‌ಸೈಡ್‌‌ ಲವ್‌ ನೆನೆಸಿಕೊಂಡು ನಮ್ಮ ಮುಖದ ಮೇಲೆ ನಗುವನ್ನು ತಂದುಕೊಳ್ಳುತ್ತೆವೆ. ಅದಕ್ಕೆ ಓನ್‌‌ಸೈಡ್‌ ಲವ್‌ ಸುಮಧುರ ಎನ್ನುವುದು. 

Comments