ಪ್ರೀತಿ ಮಿಥ್ಯ

            ಪ್ರೀತಿ ಮಿಥ್ಯ

(ಈ ಕವನ ತುಂಬ ಹಳೆಯದ್ದು, ೨೦೦೫ ರಲ್ಲಿ ಬರೆದದ್ದು)

ಮಿಥ್ಯ ಎಲ್ಲವೂ ಮಿಥ್ಯ ,

ಪ್ರೇಮದ ವ್ಯಾಪ್ತಿಯೋಳಗಿರುವುದೆಲ್ಲ ಮಿಥ್ಯ .

ಸತ್ಯ ಎಲ್ಲವೂ ಸತ್ಯ ,

ನನ್ನ ಬದುಕಿನಲ್ಲಿ

ಅರಿವು ಮಾತ್ರ ಸತ್ಯ ..



ಪ್ರೇಮದ ಬಲೆಯಲ್ಲಿ ಬಿದ್ದು ,

ಉಸಿರಿಗೆ ಉಸಿರು ಸೇರಿಸುವ ತವಕದಲಿ

ಕನಸುಗಳ ಜಾತ್ರೆ ಮಾಡುವ ಸಂಧರ್ಬದಲ್ಲಿ

ಎಡವಿಬಿದ್ದು , ಫುಣ ಯೆಚೆತ್ತುಕೊಂಡೆ ನಾ

ತಿಳಿದುಕೊಂಡೆ ನಾ

ನನ್ನ ಬದುಕಿನಲ್ಲಿ ಪ್ರೇಮವೆಂಬುದು ಮಿಥ್ಯ ಮಿಥ್ಯ ಏಂದು..



ಮಾಯೆಯ ಮೋಹದೊಳಗೆ ಬಿದ್ದು

ಮಾಯೆಗು ಸ್ನೇಹವೆಂದು ತಿಳಿದು

ಅದಕ್ಕೆ ಮತ್ತೆ ಪ್ರೀತಿಯೆಂದು ಕರೆದು

ನಾನಗೆ ನಾನೇ ದ್ರೋಹ ಬಗೆದುಕೊಂಡೆ ..



ಪ್ರೇಮದ ಕಲ್ಪನೆಗಳು ಸತ್ಯ ಸತ್ಯ ಎಂದುಕೊಂಡು

ಮಿಥ್ಯದ ದಾರಿಯಲಿ ಸಾಗಿ ಸಾಗಿ,

ಕತ್ತೆಯ ಹಾಗೆ ಕನಸಿನಲೋಕದಲ್ಲಿ ತಿರುಗಿ ತಿರುಗಿ

ಕಲ್ಪನಾಲೋಕದಲ್ಲಿ ಅಂಧಕನಾಗಿ

ಹುಚ್ಚು ಹುಚ್ಚು ಭ್ರಮೆಗಳಿಂದ

ಪ್ರೇಮವೆಂಬ ಕಿಚಿನಿಂದ ..

ನನ್ನ ನಾನೇ ಸುಟ್ಟುಕೊಂಡೆ



ಆಗ,

ಬದುಕಿನ ಅರ್ಧ ಭಾಗ ಸುಟ್ಟುಕೊಂಡೆ

ಹಲವಾರು ಅವಾಂತರಗಳು ತಂದುಕೊಂಡೆ

ಅವಳಿಂದ ಎಚ್ಚೆತ್ತುಕೊಂಡೇ ನಾ ....

ಅವಳನ್ನು ಹೃದಯದಿಂದ ಬೇರ್ಪಡಿಸಿದೆ --

ನನ್ನ ಕನಸುಗಳು ಸತ್ತ ನಂತರ



ಕಟ್ಟಿದೆನು ಶಿಘ್ರದಲಿ ಹೊಸ ಬದುಕನ್ನು

ಅವಳಿರದ... ಅವಳ ನೆರಳು ಸುಳಿಯದ

ಅವಳೊಂದಿಗಿನ ಕನಸಿನ ಒಡನಾಟದ

ನೆನಪುಗಳು ಮರಕಳಿಸದ ಹಾಗೆ

ಹೊಸ ಗುರಿಯಡೆಗೆ ಪಾದವಿಟ್ಟೆ ನಾ ..



ಮಿಥ್ಯದಿಂದ ಕೂಡಿದ ಪ್ರೀತಿಯಿಂದ ಹೊರಬಂದು

ವಾಸ್ತವದ ಬದುಕಿನ ಒಳ ಹೊಕ್ಕು

ಜೀವನದ ಮರ್ಮವನ್ನು ತಿಳಿಕೊಂಡು

ಸ್ವಾಭಿಮಾನವನ್ನು ಅರಿವಿನ ಮುಖಾಂತರ ಪಡೆದುಕೊಂಡು

ಸಾಧಕನ ಬದುಕಿನ ಸಾಧನೆಯಡೆಗೆ ಸಾಗುತ್ತಿದ್ದೇನೆ

ಸಾಗುತ್ತಲಿರುತ್ತೇನೆ ,, ಸತ್ಯದ ಲೋಕದೊಳಗೆ

ಪ್ರೀತಿ ಮಿಥ್ಯವೆಂದು ತಿಳಿದು ,

ವಾಸ್ತವ ಸತ್ಯವೆಂದು ಅರಿತು .

                 -- ರಚನೆ - ನಾನು ನಿಮ್ಮ RJ ಅರುಣ .

Comments