ಬ್ಲೇಡ್ ರಾಜಾ (Blade Raja show Mon-sat 02pm-05pm in 93.5 RED FM with RJ Arun)

ಯಾಕೋ ಬಹಳ ದಿನಗಳಾದವು ಅಲ್ವಾ ?? ಬ್ಲಾಗ್ ನಲ್ಲಿ ಏನು ಬರಿದಿಲ್ಲ . ಕೆಲಸದ ಒತ್ತಡದಲಿ ಬರಿಯಲಿಕ್ಕೆ ಆಗಿಲ್ಲ . 
ಇವಾಗ ನಾನು ಬ್ಲೇಡ್ ರಾಜ ಕಾರ್ಯಕ್ರಮ ನಡೆಸ್ಕೊಡ್ತಾ  ಇದ್ದೀನಿ . ತುಂಬ ಮೋಜು ಮಸ್ತಿ ಇರ್ರೋ ಶೋ ಇದು..  ಮನುಷ್ಯನ ಜೀವನದಲ್ಲಿ ಏನೆಲ್ಲ ಅವಾಂತರಗಳು ನಡೆಯುತ್ತವೆ . ಕೆಲವೊಮ್ಮೆ ಅನಿವಾರ್ಯವಾಗಿ ತಪ್ಪು ಮಾಡಿರ್ತಿರ ..ಅವಾಗ ಏನಾದ್ರು ಬ್ಲೇಡ್ ಹಾಕಲೇ ಬೇಕು.. . ಕೆಲ್ವೊಮ್ಮೆಯಂತು ತರ್ಲೆ ಮಾಡೋಕೆ ಹೋಗಿ ಅವಾಂತರಗಳು ಮಾಡಿರುತ್ತೇವೆ. ಅವಾಗಳು ಕೂಡ ಬ್ಲೇಡ್ ಹಾಕಲೇಬೇಕು. ಸಮಯ ಸಂಧರ್ಭಕ್ಕನುಗುಣವಾಗಿ ಬ್ಲೇಡ್ ಹಾಕೋದು ಹೇಗೆ ಅಂತ ತಮಾಷೆಯಾಗಿ , ಸ್ವಲ್ಪ ಟಪೋರಿ ತರಹ ಮಾತಡ್ತಿರ್ತೀನಿ. 

  ಹದಿ ಹರೆಯದ ವಯಸ್ಸಲಿ ಹುಡುಗ -ಹುಡುಗಿ , ಬಾಯ್ ಫ್ರೆಂಡ್ ಗರ್ಲ್ ಫ್ರೆಂಡ್ , ಲವರ್, ಬಾಯ್ಸ್ ಅಂದ್ರೆ ಯಾವಾಗಲು ಹೀಗೇನೆ ಸ್ವಲ್ಪ ಒರಟು , ಗರ್ಲ್ಸ್ ಅಂದ್ರೆ ಸ್ವಲ ಮೃದು. ಹುಡುಗರು ಜಾಸ್ತಿ ಇದನ್ನೇ ಮಾಡ್ತಾರೆ - ಹುಡುಗಿಯರು ಜಾಸ್ತಿ ಅದನ್ನೇ ಮಾಡ್ತಾರೆ,  ಹೀಗೆ ಹತ್ತು ಹಲವಾರು ಮಾತುಗಳು ನಡೆಯುತ್ತವೆ . ಇಂತಹ ಮಾತುಗಳು ಕೂಡ ನಾನು ನನ್ನ ಶೋ ನಲ್ಲಿ ಮಾತಾಡ್ತೀನಿ. ನನ್ನ ಜೊತೆಗೆ ನೀವು ಇರ್ರ್ತಿರಿ. 

ಮಾತನಾಡೋದು ಅಂದ್ರೆ ಸುಮ್ನೇನಾ ಅದು ತುಂಬ ಕಷ್ಟ, ಅಂತ ಕೆಲವೊಬ್ರು ಅಂದ್ರೆ .. ಮಾತು ಆಡೋದು ಸುಲಭ  ಅಂದ್ಕೊಂಡು  ಪಟ್ಟ ಪಟ್ಟಾ ಅಂತ ಮಾತಾಡ್ತಾರೆ .. ಈ ರೀತಿ ತಡೆ ರಹಿತ ಮಾತುಗಳು ಕೂಡ ನನ್ನ ಶೋ ನಲ್ಲಿ ನನ್ನ ಜೊತೆ ಜನ ಮಾತಡ್ತಿರ್ತರೆ . 

ಇಷ್ಟೇ ಅಲ್ಲ .. ಜನರಿಗೆ ಸಾಕಷ್ಟು  ಸಮಸ್ಯೆಗಳಿವೆ., ನಗರ ಮತ್ತು ಗ್ರಾಮಗಳಲ್ಲಿ ತುಂಬಾನೇ ಸಮಸ್ಯೆಗಳಿವೆ, ಕೆಲವೊಮ್ಮೆ  ಸರ್ಕಾರದ ಕೆಲಸ ವಿಫಲವಾಗಿರುತ್ತವೆ. ಒಟ್ಟಾರೆಯಾಗಿ ನಮ್ಮ ಜನ ತೊಂದ್ರೆನಲ್ಲಿ ಇದ್ದಾಗ ಅವರ ಸಮಸ್ಯೆ ಮಾದ್ಯಮದ ಮೂಲಕ ಸರಕಾರದ ಗಮನ ತರುವ ಕೆಲಸ ಕೂಡ  ನಾನು ಮಾಡ್ತೀನಿ . 
ಇದಕ್ಕೆಲ್ಲ ತಮ್ಮ ಸಹಕಾರ ಬೇಕೇ ಬೇಕು .. ಹಾಗಾದ್ರೆ ನನ್ನ ಶೋ ಕೇಳಿ , ಮತ್ತು  msg  or call  ಮಾಡಿ .. 
Call- 08472 -272935, or SMS-  REDG URNAMEURMSG to 58585.

Comments