ಪ್ರಚಲಿತ ಪೋಸ್ಟ್‌ಗಳು

ಬುಧವಾರ, ಮೇ 25, 2011

ಎಡ್ಸ್ ಮತ್ತು ವಚನಗಳು -" ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ "

ಒಂದು ಸಮಾರಂಭದಲ್ಲಿ ಶರಣರ ಮತ್ತು ವಚನ ಸಾಹಿತ್ಯದ ಬಗ್ಗೆ ಗೋಷ್ಠಿ ನಡೆದಿತ್ತು ..


ಭಾಷಣಕಾರ -- ಶರಣರ ವಚನಗಳು ಹಿಂದೆ , ಇಂದು ಮತ್ತು ಮುಂದು ಕೂಡ ಪ್ರಸ್ತುತ . ಎಲ್ಲರ ಬಾಳು ಬಂಗಾರವಾಗಿಸುವ ತತ್ವಗಳು ಶರಣರ ವಚನಗಳಲ್ಲಿವೆ ..

ಸಭೆಯ ಮೂಲೆನಲ್ಲಿ ಕುತವನೊಬ್ಬ ಎದ್ದು ಕೇಳಿದ -- ಅಯ್ಯ , ನಾನಗೆ ಎಡ್ಸ್ ರೋಗ ಬಂದಿದೆ .. ಈ ರೋಗ ಬಾರದಿರಲು ನಿಮ್ಮ ಶರಣರು ಏನು ಹೇಳಿದ್ದಾರೆ ?

ಭಾಷಣಕಾರ -- ಒಂದೇ ಸಾಲಿನಲ್ಲಿ ಹೇಳಿದರು- ಶರಣರು ೧೨ನೇ ಶತಮಾನದಲ್ಲಿ ಹೇಳಲಿದ್ದಾರೆ " ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ "

(ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ ಛಲಬೇಕು ಶರಣಂಗೆ ಪರದೈವವನೊಲ್ಲೆನೆಂಬ ಛಲಬೇಕು ಶರಣಂಗೆ ಲಿಂಗಜಂಗಮವನೊಂದೆಂಬ ಛಲಬೇಕು ಶರಣಂಗೆ ಪ್ರಸಾದ ದಿಟವೆಂಬ ಛಲವಿಲ್ಲದವರ ಮೆಚ್ಚ ಕೂಡಲಸಂಗಮದೇವಾ. )

ಬುಧವಾರ, ಮೇ 18, 2011

ನಮ ಗುಲ್ಬರ್ಗ RJ's...

ನಮ ಗುಲ್ಬರ್ಗ RJ's...-RJ Raghu, RJ Dinesh, RJ ARUN(me), RJ Ambika, RJ Vani

ನನ್ನ ಕಲ್ಪನಾ ಲೋಕ ಬಲು ಸುಂದರ

ನನ್ನ ಕಲ್ಪನಾ ಲೋಕ ಬಲು ಸುಂದರಚೆಂದದ ಚೆಲುವಿನ ಮೊಗದವಳು

ಅವಳ ಮೋಹಕ ಕಣ್ಣುಗಳು ಹೊಳೆಯುತಿಹವು ,

ಮಲ್ಲಿಗೆ ತೋಟದಲ್ಲಿ ನಿಂತು ನಗುತ್ತಿಹಳು,,

ಅವಳ ಅಂದಕೆ ನಾ ಮನಸೋತೆನು ..

ಇವಳೇ ನನ್ನ ಕಲ್ಪನೆಯ ಚೆಲುವೆ ...ಒಬ್ಬನೇ ಏಕಾಂತದಲ್ಲಿ ಕುತಿರಲು ,

ಈ ತರಹ ಕಲ್ಪನಾ ಲೋಕದೊಳಗಿರಲು ,

ಸುಂದರ ಸುಂದರ ಮೊಗದ ಚೆಲುವೆಯರು ,

ನನ್ನ ಕಲ್ಪನಾ ಲೋಕದಲ್ಲಿ ಸುಳಿದಾಡುತ್ತಿಹರು...

ಎಲ್ಲಿಹಳು ನನ್ನ ಕಲ್ಪನೆಯ ಚಲುವು ,?ಕಲ್ಪನಾ ಲೋಕ ಬಲು ಸುಂದರ ,

ಸುಂದರ ಲೋಕದೊಳಗೆ ಕಲ್ಪನಾ ಚೆಲುವೆ ಇನ್ನು ಸುಂದರ,

ಕಲ್ಪನೆ ವಾಸ್ತವ ಆಗಲಿ , ಆಗ ನನ್ನ ಬದುಕು ಸುಂದರ,,

ಇದು ನನ್ನ ಕಲ್ಪನೆಯ ಕವನ , ಇಲ್ಲಿ ಭಾವನೆಗಳೇ ಸುಂದರ ..

                                                                        -ರಚನೆ- ನಾನೇ ನಿಮ್ಮ RJ ಅರುಣ

ಬುಧವಾರ, ಮೇ 11, 2011

ಕನಸಿನ ಹುಡುಗಿ ಹೇಗಿರಬೇಕೆಂದು

ಕೆಲ ಹುಡುಗಿಯರು ಕೇಳುತ್ತಾರೆ ಈ ಅರುಣನಿಗೆ


ಅರುಣ ನಿನ್ನ ಕನಸಿನ ಹುಡುಗಿ ಹೇಗಿರಬೇಕೆಂದು ..!

ಹೇಳುತ್ತಿಲ್ಲ ಯಾರ್ರು ,

ನಾನೇ ನಿನ್ನ ಕನಸಿನ ರಾಣಿ ಎಂದು !