ಪ್ರಚಲಿತ ಪೋಸ್ಟ್‌ಗಳು

ಭಾನುವಾರ, ಏಪ್ರಿಲ್ 3, 2011

ಜಾತ್ರೆಯಲ್ಲಿ ಚೆಲುವೆ

ಜಾತ್ರೆಯಲ್ಲಿ ಚೆಲುವೆ


ಕಂಡಳು ಚೆಲುವೆ ನಮ್ಮೂರ ಜಾತ್ರೆಯಲಿ ,

ಹರುಷದಿ ನಕ್ಕೆ ನಾ ಮನದಲಿ ,

ನಗುವು ತುಂಬಿತ್ತು ಅವಳ ಮೊಗದಲಿ

ನಾ ಹೋಗಿ ಅವಳಿಗೆ ಹೇಗೆ ಮಾತನಾಡಿಸಲಿ ?ಜೋತೆಯಲಿದ್ದರು ಅವಳ ಸಖಿಯರು ,

ನನ್ನ ಹಿಂದೆ ನನ್ನ ಗೆಳೆಯರ್ರು ,

ಜಾತ್ರೆಯಲ್ಲಿ ಜನರ ಗದ್ದಲು ಕೇಳುತ್ತಿರಲು ,'

ನನ್ನ ಧ್ಸನಿ ಹೇಗೆ ಕೇಳಿಸಿತು ಅವಳ ಕಿವಿಗೆ ?ಜಾತ್ರೆಯಲಿ ಬಳೆಗಾರನ ಅಂಗಡಿ ಎದುರು

ಸದಾ ಮಾತನಾಡುವ ಹೆಣ್ಣುಮಕ್ಕಳ ದಂಡಿರಲು ,

ನಾನು ಮಾತ್ರ ಅವಳಕಡೆಗೆ ನೋಡಲು ,

ಗದ್ದಲದಲಿ ಅವಳಿಗೆ ನನ್ನ ಮೊಗ ಕಂಡಿತೆ..?ಎರಡೆ ಎರಡು ನಿಮಿಷದಲ್ಲಿ ಅವಳು ಮಾಯವಾಗಲು ,

ಜಾತ್ರೆಯಲ್ಲ ಹುಡುಕಿದರೂ ಕಾಣದಿರಲು ಅವಳ ಮೊಗವು ,

ನನ್ನ ಕಣ್ಣಿನಲ್ಲಿ ಮಾತ್ರ ಕುಂತಿದೆ ಅವಳ ಚೆಲುವು ,

ಮತ್ತೆ ಕಾಣುವೆನೆ ಅವಳ ಮೊಗವು --- ಜಾತ್ರೆಯ ಚೆಲುವು ಒಲವು ?..

          -- ರಚನೆ - ನಾನು ನಿಮ್ಮ RJ ಅರುಣ

ಕಾಮೆಂಟ್‌ಗಳಿಲ್ಲ: