ಪ್ರಚಲಿತ ಪೋಸ್ಟ್‌ಗಳು

ಗುರುವಾರ, ಮಾರ್ಚ್ 24, 2011

ಸುಂದರತೆ

       ಸುಂದರತೆ


ಸುಂದರ ಮೊಗವ ಕಂಡು

ಸುಂದರವೇ ಸರ್ವಸ್ವವೆಂದು

ಸುಂದರವೇ ನನ್ನ ಭಾಗ್ಯವೆಂದು

ಸುಂದರವೇ ನನ್ನ ಹೃದಯವೆಂದು



ಸುಂದರ ಮೊಗವ ಕಂಡು

ಸುಂದರದ ಭಾವನೆಗಳಿಂದ

ಸುಂದರವಾದ ಕನಸುಕಂಡೆ

ಸುಂದರ ಕನಸು ನನಸಾಗಿಸಲು ಬಯಸಿದೆ



ಸುಂದರ ಮೊಗವ ಕಂಡು

ಸುಂದರ ಸೃಷ್ಟಿಗೆ ಹೋಲಿಸಿದೆ

ಸುಂದರವಾದ ಹೂವನ್ನು ಕಂಡು

ಸುಂದರ ಮೊಗವನು ನೆನೆದೆ



ಸುಂದರವಾದ ಹರೆಯದ ವಯಸ್ಸಿದು

ಸುಂದರತೆಯು ಮೊಗದಲ್ಲಿ ಕಾಣುವ

ಸುಂದರವಾದ ಹುಚು ಹರೆಯದ ವಯಸ್ಸಿದು

             -- ರಚನೆ - ನಾನು ನಿಮ್ಮ RJ ಅರುಣ

ಅಂತರಾಳದ ಕಡೆಗೆ

  ಅಂತರಾಳದ ಕಡೆಗೆ




ಹೃದಯ ಸಮುದ್ರದಲ್ಲಿ

ಕಲ್ಪನಾ ಲೋಕದ ಸಂಚಾರದಲ್ಲಿ

ಪ್ರೀತಿಯ ದೋಣಿಯ ಮೇಲೆ

ಕನಸಿನ ರಾಣಿ ಪಯಣಿಸುತ್ತಿದ್ದಾಳೆ

ನನ್ನ ಅಂತರಂಗದ ಕಡೆಗೆ



ಬಾ ಒಲವೆ ಬಾ

ಅಂತರಾತ್ಮದ ಕದ ತಗೆದಿದೆ

ಹೃದಯದ ಬಾಗಿಲಲಿ ತೋರಣ ಕಟ್ಟಿದೆ

ಪ್ರೀತಿಯ ಹೂಗಳು ಸ್ವಾಗತಿಸುತ್ತಿವೆ



ಪ್ರೀತಿಯ ಜ್ಯೋತಿ

ಮನದೊಳಗೆ ಹಚ್ಚಲು

ಹೃದಯವನ್ನು ಪ್ರೀತಿಯಿಂದ ಬೆಳಗಿಸಲು

ನನ್ನ ಅಂತರಂಗದ ಕಡೆಗೆ ಬಾ

           -- ರಚನೆ - ನಾನು ನಿಮ್ಮ RJ ಅರುಣ


ನೀನಾಗಬೇಕು

         ನೀನಾಗಬೇಕು


ಕಾವ್ಯದ ಚಿಗುರು ನೀನಾಗಬೇಕು

ಪದಗಳ ತುಂಬೆಲ್ಲ ನೀನಡಗಿರಬೇಕು

ಅಕ್ಷರಗಳಲ್ಲಿ ನಿನ್ನ ಮುಗುಳ್ನಗೆಯಿರಬೇಕು

ಏಕೆಂದರೆ ನೀನು ನನ್ನ ಕಾವ್ಯದ ವಸ್ತುವಗಬೇಕು



ನನ್ನ ಮನೆಯಂಗಳದ

ಹೂದೋಟ ನೀನಾಗಬೇಕು

ಪ್ರತಿಯೊಂದು ಹೂವುಗಳಲ್ಲಿ ...

ನಿನ್ನ ತುಟಿಯಂಚಿನ ನಗುವಿರಬೇಕು



ನನ್ನ ಮನೆಯ ಜ್ಯೋತಿ ನೀನಾಗಬೇಕು

ಭಾವನೆಗಳು ಬದುಕಬೇಕು

ಕನಸುಗಳು ಇರಬೇಕು

ಹೃದಯ ಸದಾ ಬಡಿತಿರಬೇಕು

ಬಡಿತದಲ್ಲಿ ನಿನ್ನ ಒಲವಿನ ನಾಡ ಇರಬೇಕು

ಒಲವಿನ ಗೀತೆ ಇರಬೇಕು

                 -- ರಚನೆ - ನಾನು ನಿಮ್ಮ RJ ಅರುಣ

ಪ್ರೀತಿ ಮಿಥ್ಯ

            ಪ್ರೀತಿ ಮಿಥ್ಯ

(ಈ ಕವನ ತುಂಬ ಹಳೆಯದ್ದು, ೨೦೦೫ ರಲ್ಲಿ ಬರೆದದ್ದು)

ಮಿಥ್ಯ ಎಲ್ಲವೂ ಮಿಥ್ಯ ,

ಪ್ರೇಮದ ವ್ಯಾಪ್ತಿಯೋಳಗಿರುವುದೆಲ್ಲ ಮಿಥ್ಯ .

ಸತ್ಯ ಎಲ್ಲವೂ ಸತ್ಯ ,

ನನ್ನ ಬದುಕಿನಲ್ಲಿ

ಅರಿವು ಮಾತ್ರ ಸತ್ಯ ..



ಪ್ರೇಮದ ಬಲೆಯಲ್ಲಿ ಬಿದ್ದು ,

ಉಸಿರಿಗೆ ಉಸಿರು ಸೇರಿಸುವ ತವಕದಲಿ

ಕನಸುಗಳ ಜಾತ್ರೆ ಮಾಡುವ ಸಂಧರ್ಬದಲ್ಲಿ

ಎಡವಿಬಿದ್ದು , ಫುಣ ಯೆಚೆತ್ತುಕೊಂಡೆ ನಾ

ತಿಳಿದುಕೊಂಡೆ ನಾ

ನನ್ನ ಬದುಕಿನಲ್ಲಿ ಪ್ರೇಮವೆಂಬುದು ಮಿಥ್ಯ ಮಿಥ್ಯ ಏಂದು..



ಮಾಯೆಯ ಮೋಹದೊಳಗೆ ಬಿದ್ದು

ಮಾಯೆಗು ಸ್ನೇಹವೆಂದು ತಿಳಿದು

ಅದಕ್ಕೆ ಮತ್ತೆ ಪ್ರೀತಿಯೆಂದು ಕರೆದು

ನಾನಗೆ ನಾನೇ ದ್ರೋಹ ಬಗೆದುಕೊಂಡೆ ..



ಪ್ರೇಮದ ಕಲ್ಪನೆಗಳು ಸತ್ಯ ಸತ್ಯ ಎಂದುಕೊಂಡು

ಮಿಥ್ಯದ ದಾರಿಯಲಿ ಸಾಗಿ ಸಾಗಿ,

ಕತ್ತೆಯ ಹಾಗೆ ಕನಸಿನಲೋಕದಲ್ಲಿ ತಿರುಗಿ ತಿರುಗಿ

ಕಲ್ಪನಾಲೋಕದಲ್ಲಿ ಅಂಧಕನಾಗಿ

ಹುಚ್ಚು ಹುಚ್ಚು ಭ್ರಮೆಗಳಿಂದ

ಪ್ರೇಮವೆಂಬ ಕಿಚಿನಿಂದ ..

ನನ್ನ ನಾನೇ ಸುಟ್ಟುಕೊಂಡೆ



ಆಗ,

ಬದುಕಿನ ಅರ್ಧ ಭಾಗ ಸುಟ್ಟುಕೊಂಡೆ

ಹಲವಾರು ಅವಾಂತರಗಳು ತಂದುಕೊಂಡೆ

ಅವಳಿಂದ ಎಚ್ಚೆತ್ತುಕೊಂಡೇ ನಾ ....

ಅವಳನ್ನು ಹೃದಯದಿಂದ ಬೇರ್ಪಡಿಸಿದೆ --

ನನ್ನ ಕನಸುಗಳು ಸತ್ತ ನಂತರ



ಕಟ್ಟಿದೆನು ಶಿಘ್ರದಲಿ ಹೊಸ ಬದುಕನ್ನು

ಅವಳಿರದ... ಅವಳ ನೆರಳು ಸುಳಿಯದ

ಅವಳೊಂದಿಗಿನ ಕನಸಿನ ಒಡನಾಟದ

ನೆನಪುಗಳು ಮರಕಳಿಸದ ಹಾಗೆ

ಹೊಸ ಗುರಿಯಡೆಗೆ ಪಾದವಿಟ್ಟೆ ನಾ ..



ಮಿಥ್ಯದಿಂದ ಕೂಡಿದ ಪ್ರೀತಿಯಿಂದ ಹೊರಬಂದು

ವಾಸ್ತವದ ಬದುಕಿನ ಒಳ ಹೊಕ್ಕು

ಜೀವನದ ಮರ್ಮವನ್ನು ತಿಳಿಕೊಂಡು

ಸ್ವಾಭಿಮಾನವನ್ನು ಅರಿವಿನ ಮುಖಾಂತರ ಪಡೆದುಕೊಂಡು

ಸಾಧಕನ ಬದುಕಿನ ಸಾಧನೆಯಡೆಗೆ ಸಾಗುತ್ತಿದ್ದೇನೆ

ಸಾಗುತ್ತಲಿರುತ್ತೇನೆ ,, ಸತ್ಯದ ಲೋಕದೊಳಗೆ

ಪ್ರೀತಿ ಮಿಥ್ಯವೆಂದು ತಿಳಿದು ,

ವಾಸ್ತವ ಸತ್ಯವೆಂದು ಅರಿತು .

                 -- ರಚನೆ - ನಾನು ನಿಮ್ಮ RJ ಅರುಣ .

ಗುರುವಾರ, ಮಾರ್ಚ್ 17, 2011

ಬಾರಾ ಗೆಳತಿ ಬಣ್ಣದ ಹಬ್ಬಕ

ಬಾರಾ ಗೆಳತಿ ಬಣ್ಣದ ಹಬ್ಬಕ

ಮತ್ತೆ ಬಂತು ಗೆಳತಿ ಹೋಳಿ ಹುಣ್ಣಿಮೆ ,

ಹಚ್ಚಬೇಕು ಬಣ್ಣ ಗಲ್ಲಕ್ಕೆ ಮತ್ತೊಮ್ಮೆ,

ಮುತ್ತನಿಟ್ಟು ಮುದ್ದು ಮಾಡ್ಬೇಕು ಮಗದೊಮ್ಮೆ ,

ನಮ್ಮೂರಿಗೆ ಬಾ ಗೆಳತಿ ಸುಮ್ಮನೆ ..



ಕೆಂಪನ ಗಲ್ಲಕ ಹಚ್ತೀನಿ ಗುಲಾಬಿ ಬಣ್ಣ ,

ನಿನ್ನ ಕೆಂದುಟಿಗೆ ಕೊಡ್ತೀನಿ ಮುತ್ತನ್ನ,

ಬಾರಾ ಗೆಳತಿ ಬಣ್ಣದ ಓಕುಳಿ ಆಡೋಣ ,

ನಗು ನಗುತಾ ಸಕ್ಕರಿ ಸರ ತಿನ್ನೋಣ ,



ನಾವಿಬ್ರು ಕೂಡಿ ಕಡ್ಲಿ ಹುರ್ರಿಯೋಣ,

ಬೆಂಕ್ಯಾಗ ಖೊಬ್ರಿ ಸುಟ್ಟು ತಿನ್ನೋಣ,

ಬಾರಾ ಗೆಳತಿ ಬಣ್ಣದ ಆಟ ಆಡೋಣ

ಪ್ರೀತಿಯ ಬಣ್ಣ ಹಚ್ಚಿ ಖುಷಿಯಗಿರೋಣ .. ..

                         ರಚನೆ- ನಾನು ನಿಮ್ಮ RJ ಅರುಣ .

                  Superhits 93.5 RED FM.

ಸೋಮವಾರ, ಮಾರ್ಚ್ 14, 2011

ಆಗುತ್ತಿಲ್ಲ​ವಲ್ಲ ಗೆಳತಿ .!

ಹತ್ತಿರವಿಲ್ಲ ಗೆಳತಿ ನಿನ್ನ ಮನೆ ,

ಆಗುತ್ತಿಲ್ಲವಲ್ಲ ..

ಹೊತ್ತಾರೆಯೇದ್ದು ನಿನ್ನ ಮೊಗ ನೋಡಲು ...!



ನಿಮ್ಮುರಲ್ಲಿಲ್ಲ ಮೊಬೈಲ್ ನೆಟ್ವರ್ಕು

ಆಗುತ್ತಿಲ್ಲವಲ್ಲ ..

ನಿನ್ನೊಡನೆ ಹೆಚ್ಚಿಗೆ ಮಾತನಾಡಲು .. !



ಗೊತ್ತಿಲ್ಲವಲ್ಲ ನಿನ್ನ ವಿಳಾಸ .

ಆಗುತ್ತಿಲ್ಲವಲ್ಲ ..

ಬಸ್ಸನೇರಿ ನಿನ್ನುರಿಗೆ ಬರಲು ...!



ಆಗುತ್ತಿಲ್ಲವಲ್ಲ ..

ಗೆಳತಿ .!

ನಿನ್ನ ಮರೆಯಲು ...
 
                  ರಚನೆ .- ನಾನು ನಿಮ್ಮ ....  RJ ಅರುಣ

ಗುರುವಾರ, ಮಾರ್ಚ್ 10, 2011

371 ನೇವಿಧಿ ತಿದ್ದುಪಡಿ

371 ನೇವಿಧಿ ತಿದ್ದುಪಡಿ

ನಮ್ಮ ಭಾಗ ಅಭಿವೃದಿ ಆಗಬೇಕಾದರೆ , ಮುಖ್ಯವಾಗಿ ನಮ್ಮ ಭಾಗದ ಪುಡಾರಿಗಳು 371 ನೇ ವಿಧಿ ಮೇಲೆ ರಾಜಕೀಯ ಮಾಡುವದು ನಿಲ್ಲಿಸಲಿ .

ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳುವುದಕೊಸ್ಕರ 371 ನೇ ವಿಧಿ ತಿದ್ದು ಪಡಿ ಮಾಡ್ತಿವಿ, ನಮ್ಮ ಹೈದರಾಬಾದ್ ಕರ್ನಾಟಕ ಅಭಿವೃದ್ದಿ ಮಾಡ್ತಿವಿ ಅಂತ ಹೇಳ್ತಾ ನಮ್ಮ ಮುಗ್ದ ಜನರ ಓಟು ಪಡೆದು ಖುರ್ಚಿ ಏರುತ್ತಿದ್ದಾರೆ. ಇಂಥ ಅಧಿಕಾರ ದಾಹಿ ಪುಡಾರಿಗಳಿಂದ ನಮ್ಮ ನಾಡು ಉದ್ದಾರ ಆಗೋದಿಲ್ಲ . ಇದರಿಂದ ನಮ್ಮ ಜನ ಬೇಸತ್ತಿದ್ದಾರೆ.

ಒಂದು "facebook" ಸೋಶಿಯಲ್ ನೆಟ್ವರ್ಕ್ ನ ಸಂದೇಶ ಗಳು ಇಜಿಪ್ಟ್ನ ನ ಪ್ರಜಾಪ್ರಭುತ್ವದ ಗೆಲುವಿಗೆ ಕಾರಣವಾಯಿತು..ಕಾರಣ ಅಲ್ಲಿನ ಹೋರಾಟ ಪ್ರಾಮಾಣಿಕವಾಗಿತ್ತು ಮತ್ತು ನಿಸ್ವಾರ್ಥ್ವಗಿತ್ತು .

ಒಂದುವೇಳೆ ಕೆಲವು ರಾಜಕೀಯದವರ ಹೋರಾಟ ಪ್ರಾಮಾಣಿಕವಾಗಿ ಇದ್ದಾರೆ ಎಂದೋ ಈ371 ನೇ ವಿಧಿ ತಿದ್ದುಪಡಿ ಆಗ್ತಿತ್ತು .. ಇನ್ನಾದರೂ ಅಧಿಕಾರ ದಾಹದಿಂದ ಹೊರಬಂದು ಪ್ರಾಮಾಣಿಕ ಪ್ರಯತ್ನ ಮಾಡಿ.. ಇಲ್ಲವಾದರೆ ನಮ್ಮ ಮುಗ್ದ ಜನ ನಿಮ್ಮೆದುರೆ ತಿರುಗಿ ಬಿದ್ದರೆ ನಿಮಗೆ ಉಳಿಗಾಲವಿಲ್ಲ .. ನಮ್ಮ ಭಾಗದ ಅಭಿವೃದ್ದಿ ಕಲ್ಪನೆ ನಮ್ಮ ಭಾಗದ ಜನ ಪ್ರತಿನಿಧಿಗಳಲ್ಲಿ ಬರುವವರೆಗೂ ನಮ್ಮ ಭಾಗ ಉದ್ದಾರ ಆಗೋಲ್ಲ .. ಇಲ್ಲ ಜನ ಸಾಮಾನ್ಯರೇ ಒಂದು ಬೃಹತ್ತ್ ಕ್ರಾಂತಿ ಮಾಡ್ಬೇಕು . ಇದಕ್ಕೆ ಉತ್ತಮ ನಾಯಕತ್ವದ ಕೊರತೆ ಇದೆ. ಜೊತೆಗೆ ಎಸ್ಟೋ ಜನಕ್ಕೆ 371 ನೇ ವಿಧಿಅಂದ್ರೆ ಏನು ಅಂತ ಗೊತ್ತಿಲ್ಲ ಪ್ರತಿಯೊಬ್ಬರಿಗೂ 371 ನೇ ವಿಧಿ ಬಗ್ಗೆ ಮಾಹಿತಿ ಬೇಕು .. ಅಂದಾಗ ಮಾತ್ರ ಹೈದರಾಬಾದ್ ಕರ್ನಾಟಕ ಅಭಿವೃದ್ದಿ ಸಾಧ್ಯ .

---- RJ Arun- (Radio jockey in 93.5 RED FM)

Email ID- a.arun770@gmail.com

ಶುಕ್ರವಾರ, ಮಾರ್ಚ್ 4, 2011

ಮುಂಜಾನೆಯ ಮೊಗದವಳು

ಮುಂಜಾನೆಯ ಮೊಗದವಳು




ಮುಂಜಾನೆಯ ಮಲ್ಲಿಗೆ ಅರಳಿದ ಹಾಗೆ ,

ನಿನ್ನ ಮೊಗದ ಮೇಲೆ ನಗುವ ಕಂಡೆ ,

ಹಾರುತ್ತ ಬರುವ ದುಂಬಿಯ ಹಾಗೆ,

ನಾ ಓಡೋಡಿ ನಿನ್ನ ಬಳಿ ಬಂದೆ .



ಮೂಡಣದಿ ಮೂಡಿರಲು ಸೂರ್ಯನ ಕಿರಣಗಳು ,

ನಿನ್ನ ಮೊಗದ ತುಂಬೆಲ್ಲ ಹೊನ್ನಿನ ಮೆರಗು,

ಹೊಳೆಯುತ್ತಿವೆ ನಿನ್ನ ವಜ್ರದಂಥಹ ಕಣ್ಣುಗಳು ,

ನಿನ್ನ ಕಂಡು ನಾಚುತ್ತಿವೆ ಮನೆಯಂಗಳದ ಮಲ್ಲಿಗೆ, ಸಂಪಿಗೆಗಳು ..

ಸುರಿಸಲೇ ನಾ ನಿನ್ನ ತುಟಿಮೇಲೆ ಮುತಿನ ಸುರಿಮಳೆಯು.

ರಚನೆ .- ನಾನು RJ ಅರುಣ ..

ಗುರುವಾರ, ಮಾರ್ಚ್ 3, 2011

ಓ ನನ್ನ ಒಡಲಾಳದ ಗೆಳತಿ,

ಓ ನನ್ನ ಒಡಲಾಳದ ಗೆಳತಿ,
ನೀ ನನ್ನ ಲೀಲಾವತಿ .
ನನ್ನ ಮನೆ ದೀಪ ಹಚ್ಚಲು ಯಾವಾಗ ಬರ್ತಿ ..
ಕಾದು ಉಳಿತಿರುವೆ ನನ್ನ ಸಖಿ ,
ಬಾ ಬೇಗ ನೀ ನನ್ನ ಚಂದ್ರಮುಖಿ ..
ಮನೆಯಂಗಳದಿ ಬಂದು ಕುಣಿದಾಡು
ಅಂಗಳದಲಿ ಪ್ರೇಮದ ರಂಗವಲಿ ಹಾಕು ..
ಮೊಗವ ಕಾಣದೆ , ಮನಸು ಕಂಡೆ ..
ಮನಸು ಕಾಣುತ , ಹೃದಯ ಕಂಡೆ..
ಹೃದಯದೊಳಗೆ ನಿನ್ನ ಒಲವು ಕಂಡೆ ..
ನಿನ್ನೊಳು ನನ್ನ ಕಂಡೆ ,
ಹೇ ಮುದ್ದು ಮನದ ಹುಡುಗಿ ,
ತೋರಿಸೆ ನಿನ್ನ ಮೊಗದ ಚೆಲುವ..
ಕಾಡಿಸಬೇಡ ನನ್ನ ಬೆಡಗಿ,
ನೀ ಬಾ ಬೇಗ ನನ್ನ ಒಡಲಿಗೆ

 -ರಚನೆ- ನಾನು      RJ ಅರುಣ್